Header Ads

test

ಸಾಫ್ಟ್‌ವೇರ್ ಕಂಪೆನಿ ಆಪೆಲ್ ಲೋಗೋ ಹೇಗೆ ಡಿಸೈನ್ ಮಾಡಿದರೋ ಗೊತ್ತಾ..? ಇದುವರೆಗೆ ಎಷ್ಟು ಸಲ ಬದಲಾಗಿದೆಗೊತ್ತೆ..?

ಸಾಫ್ಟ್‌ವೇರ್ ದಿಗ್ಗಜ ಕಂಪೆನಿ ಆಪೆಲ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮ್ಯಾಕ್ ಪಿಸಿ, ಮ್ಯಾಕ್ ಬುಕ್, ಐಫೋನ್, ಐಪ್ಯಾಡ್, ಆಪೆಲ್ ವಾಚ್‍ನಂತಹ ಅನೇಕ ತಂತ್ರಜ್ಞಾನ ಡಿವೈಸ್‌ಗಳನ್ನು ಜಗತ್ತಿಗೆ ಪರಿಚಯಿಸಿ ಬಳಕೆದಾರರನ್ನು ಬಹಳಷ್ಟು ಸೆಳೆಯುತ್ತಿದೆ. ಆಪೆಲ್ ಕಂಪೆನಿಯನ್ನು ಸ್ಟೀವ್ ಜಾಬ್ಸ್ ಸ್ಥಾಪಿಸಿದರು. ಈಗ ಟಿಮ್ ಕುಕ್ ಈ ಕಂಪೆನಿಗೆ ಸಿಇಓ ಆಗಿದ್ದಾರೆ. ಆದರೆ ನಿಮಗೆ ಗೊತ್ತೇ..? ಆಪೆಲ್‌ಗೆ ಎಲ್ಲಾ ಉತ್ಪನ್ನಗಳ ಮೇಲೆ ಆಪೆಲ್ ಲೋಗೋ ಇರುತ್ತದೆ..! ಒಂದು ಕಡೆ ಆಪೆಲ್‌ನ್ನು ಸ್ವಲ್ಪ ಕಚ್ಚಿದಂಗೆ ಇರುತ್ತದೆ. ಆಪೆಲ್ ಮೊದಲು ಸ್ಥಾಪಿಸಿದಾಗಿನಿಂದ ಇದೇ ಲೋಗೋ ಇದೆ. ಆದರೆ ಈ ಲೋಗೋ ಕ್ರಿಯೇಟ್ ಮಾಡುವುದರ ಹಿಂದೆ ಇರುವ ಅಸಲಿ ಕಥೆ ಏನು ಅಂತ ಗೊತ್ತಾ..? ಅದನ್ನೇ ಈಗ ತಿಳಿದುಕೊಳ್ಳೋಣ.


ಸ್ಟೀವ್ ಜಾಬ್ಸ್ ಆಪೆಲ್ ಕಂಪ್ಯೂಟರ್ಸ್ ಕಂಪೆನಿಯನ್ನು ಸ್ಥಾಪಿಸಿದ ಬಳಿಕ ಆ ಕಂಪೆನಿ ಲೋಗೋ ಕ್ರಿಯೇಟ್ ಮಾಡಬೇಕೆಂದುಕೊಂಡ. ಅದಕ್ಕಾಗಿ ರೊನಾಲ್ಡ್ ವಾಯೆನ್ ಎಂಬ ಗ್ರಾಫಿಕ್ ಡಿಸೈನರನ್ನು ಸಂಪರ್ಕಿಸಿದ. ಆದರೆ ಆತ ಆಗ ಯಾವ ಲೋಗೋ ಡಿಸೈನ್ ಮಾಡಿದನೆಂದರೆ… ಐಸಾಕ್ ನ್ಯೂಟನ್ ಆಪಲ್ ಮರದ ಕೆಳಗೆ ಕುಳಿತಿದ್ದಾಗ ಆತನ ತಲೆ ಮೇಲೆ ಆಪೆಲ್ ಒಂದು ಬೀಳುತ್ತದೆ. ಇದನ್ನೇ ಆತ ಲೋಗೋ ಆಗಿ ಬರೆದ. ಆದರೆ ಅದು ಸ್ಟೀವ್‌ಗೆ ಇಷ್ಟವಾಗಲಿಲ್ಲ. ಹಾಗಾಗಿ ಆತ ಮತ್ತೊಬ್ಬ ಗ್ರಾಫಿಕ್ ಡಿಸೈನರನ್ನು ಸಂಪರ್ಕಿಸಿದ.

ರಾಬ್ ಜನೋಫ್ ಎಂಬ ಗ್ರಾಫಿಕ್ ಡಿಸೈನರನ್ನು ಆಪೆಲ್‌ ಲೋಗೋವನ್ನು ಡಿಸೈನ್ ಮಾಡುವಂತೆ ಸ್ಟೀವ್ ಜಾಬ್ಸ್ ಹೇಳುತ್ತಾನೆ. ಇದರಿಂದ ಆತ ಹಸಿರು ಬಣ್ಣದ ಆಪೆಲ್‌ನ್ನು ಸ್ವಲ್ಪ ಕಚ್ಚಿದಂತೆ ಬರೆದ. ಈ ಡಿಸೈನ್ ಸ್ಟೀವ್‌‍ಗೆ ಇಷ್ಟವಾಯಿತು. ಆದರೆ ಆ ಹಣ್ಣು ಸಂಪೂರ್ಣ ಹಸಿರು ಬಣ್ಣದಲ್ಲಿತ್ತು. ಹಾಗಾಗಿ ಅದು ಇಷ್ಟವಾಗಲಿಲ್ಲ. ಹಾಗಾಗಿ ಸ್ವತಃ ಆ ಹಣ್ಣಿನಲ್ಲಿ ಕಾಮನಬಿಲ್ಲು ಬಣ್ಣಗಳನ್ನು ಸೇರಿಸಿದರು. ಆ ಬಳಿಕ ಬಣ್ಣಗಳು ಹೋಗಿ ಪ್ಲೆಯಿನ್ ಬಣ್ಣಕ್ಕೆ ಆಪೆಲ್ ಲೋಗೋ ಬದಲಾಯಿತು. ಇದು …ಆಪೆಲ್ ಕಂಪೆನಿ ಲೋಗೋ ಹಿಂದೆ ಇರುವ ಅಸಲಿ ರಹಸ್ಯ.

ಆದರೆ ರಾಬ್ ಜನೋಫ್ ಆಪೆಲನ್ನು ಆ ರೀತಿ ಕಚ್ಚಿದಂಗೆ ಯಾಕೆ ಡಿಸೈನ್ ಮಾಡಿದೆ ಎಂದು ಕೆಲವರು ಆತನನ್ನು ಪ್ರಶ್ನಿಸಿದರಂತೆ. ಇದಕ್ಕೆ ರಾಬ್ ಏನೆಂದು ಉತ್ತರ ಕೊಟ್ಟನೆಂದರೆ…ಆಪೆಲನ್ನು ಕಚ್ಚಿದಂತೆ ಅಲ್ಲದೆ ಮಾಮೂಲಿಯಾಗಿಯೇ ಇಟ್ಟರೆ ಅದು ಟೊಮ್ಯಾಟೋ ತರಹ ಕಾಣುತ್ತದಂತೆ. ಹಾಗಾಗಿ ನೋಡುವವರು ಅದನ್ನು ಟೊಮ್ಯಾಟೋ ಅಂದುಕೊಳ್ಳುತ್ತಾರೆ. ಹಾಗಾಗಿ ಆಪೆಲನ್ನು ಸ್ವಲ್ಪ ಕಚ್ಚಿದಂಗೆ ವಿನ್ಯಾಸ ಮಾಡಿದೆ ಎಂದು ರಾಬ್ ಹೇಳಿದ್ದಾನೆ. ಏನೇ ಆಗಲಿ ಆಪೆಲ್ ಕಂಪೆನಿ ಲೋಗೋ ಆ ರೀತಿ ರೂಪಾಂತರವಾಗಿ ಅದು ಅದೃಷ್ಟ ತಂದದ್ದು ಮಾತ್ರ ಇತಿಹಾಸ. ಆಪೆಲ್ ಲೋಗೋ ಫೋನ್ ಹಿಂದೆ ಇದ್ದರೆ ಅದೊಂದು ಪ್ರೆಸ್ಟೀಜ್ ಇಶ್ಯೂ ಎಂದು ಭಾವಿಸುವವರು ಬಹಳಷ್ಟು ಮಂದಿ ಇದ್ದಾರೆ. ಹಾಗಾಗಿ ಬಳಷ್ಟು ಮಂದಿ ಐಫೋನ್ ಕೊಳ್ಳಲು ಆಸಕ್ತಿ ತೋರುತ್ತಾರೆ.

2 comments: