Header Ads

test

ವಿಮಾನದ ರೆಕ್ಕೆಗಳು ಬಾಗಿರುವುದು ಯಾಕೆಂದು ಗೊತ್ತಾ..?

ವಿಮಾನದಲ್ಲಿ ನೀವೆಂದಾದರೂ ಪಯಣಿಸಿದ್ದೀರಾ..? ಇಲ್ಲವೇ..! ಫರವಾಗಿಲ್ಲ ಬಿಡಿ. ಯಾಕೆಂದರೆ ನಾವು ಈಗ ಹೇಳಲು ಹೊರಟಿರುವುದು ಅದರ ಬಗ್ಗೆ ಅಲ್ಲ, ಆದರೂ ವಿಮಾನಗಳಿಗೆ ಸಂಬಂಧಿಸಿದ ವಿಷಯವೇ. ಇದನ್ನು ತಿಳಿದುಕೊಳ್ಳಲು ನೀವು ವಿಮಾನದಲ್ಲಿ ಪ್ರಯಾಣಿಸಬೇಕಾಗಿಲ್ಲ, ವಿಮಾನವನ್ನು ಗಮನಿಸಿದರೆ ಸಾಕು. ಇಷ್ಟಕ್ಕೂ ವಿಷಯವೇನಂತೀರಾ? ಏನಿಲ್ಲಾ… ವಿಮಾನದ ರೆಕ್ಕೆಗಳು ಮೊದಲಿನಿಂದ ಕೊನೆಯವರೆಗೆ ಸಮವಾಗಿರದೆ, ಕೊನೆಯಲ್ಲಿ ಮೇಲ್ಗಡೆಗೆ ಅಥವಾ ಮೇಲೆ ಹಾಗೂ ಕೆಳಗಡೆಗೆ ಬಾಗಿರುತ್ತವಲ್ಲವೇ…? ಯಾಕೆ ಹೀಗೆಂದು ನಿಮಗೆ ಗೊತ್ತೇ? ಅದನ್ನು ಈಗ ತಿಳಿದುಕೊಳ್ಳೋಣ.


ಕೊನೆಯಲ್ಲಿ ಬಾಗಿರುವ ವಿಮಾನದ ರೆಕ್ಕೆಗಳನ್ನು ವಿಂಗ್ ಲೆಟ್ಸ್ (Winglets) ಎಂದು ಕರೆಯುತ್ತಾರೆ . ಅವು ರೆಕ್ಕೆಗಳ ಕೊನೆಯಲ್ಲಿ ಮೇಲ್ಮುಖವಾಗಿ ಅಥವ ದ್ವಿಮುಖ ( ಮೇಲೆ ಹಾಗೂ ಕೆಳಗೆ) ವಾಗಿ ಬಾಗಿರುತ್ತವೆ. ಹೀಗೇಕೆಂದರೆ… ರೆಕ್ಕೆಗಳು ಮೊದಲಿನಿಂದ ಕೊನೆಯವರೆಗೂ ಸಮತಟ್ಟಾಗಿದ್ದರೆ ,ರೆಕ್ಕೆಗಳ ಮೇಲ್ಭಾಗಕ್ಕಿಂತಲೂ ಹೆಚ್ಚಿನ ಭಾರ ಕೆಳಭಾಗಕ್ಕೆ ಬೀಳುತ್ತದೆ. ಇದರಿಂದಾಗಿ ರೆಕ್ಕೆಗಳ ಕೆಳಗೆ ಒತ್ತಡ ಅಧಿಕವಾರುತ್ತದೆ. ಹೀಗೆ ಉಂಟಾದ ಒತ್ತಡ ಯಾವಾಗಲೂ ಮೇಲೆ ಹೋಗಲು ಪ್ರಯತ್ನಿಸುತ್ತಿರುತ್ತದೆೆ.

ಒಂದು ವೇಳೆ ರೆಕ್ಕೆಗಳು ಸಮತಟ್ಟಾಗಿದ್ದರೆ ಹೀಗಾಗದೆ, ಪ್ರಕ್ರಿಯೆ ನಿಧಾನವಾಗುತ್ತದೆ. ಇದರಿಂದಾಗಿ ವಿಮಾನ ಟೇಕಾಫ್ ಆಗಲು ಹೆಚ್ಚು ಸಮಯ ತಗುಲುವುದರಿಂದ ದುಭಾರಿ ವೆಚ್ಚದ ಇಂಧನ ವ್ಯರ್ಥವಾಗುತ್ತದೆ ಹಾಗೂ ಪ್ರಯಾಣಿಕರ ಸಮಯವೂ ವ್ಯರ್ಥವಾಗುತ್ತದೆ. ಇವುಗಳನ್ನು ನಿವಾರಿಸಲೆಂದೇ ವಿಮಾನಗಳ ರೆಕ್ಕೆಗಳನ್ನು ಹೀಗೆ ತಯಾರಿಸಲು ಪ್ರಾರಂಭಿಸಿದರು. ರೆಕ್ಕೆಗಳ ಕೊನೆಯನ್ನು ಮೇಲ್ಮುಖವಾಗಿ ಅಥವ ದ್ವಿಮುಖ ( ಮೇಲೆ ಹಾಗೂ ಕೆಳಗೆ) ಬಾಗಿರುವಂತೆ ಮಾಡುವುದರಿಂದ ರೆಕ್ಕೆಗಳ ಕೆಳಭಾಗದಲ್ಲಿ ಉಂಟಾಗುವ ಒತ್ತಡ ಬಲು ಬೇಗನೆ ಮೇಲೆ ಹೋಗುತ್ತದೆ ಇದರಿಂದಾಗಿ ವಿಮಾನದ ಮೆಲೆ ಭಾರ ಬೀಳುವುದಿಲ್ಲ ಹಾಗೂ ಬೇಗನೆ ಟೇಕಾಫ್ ಆಗುತ್ತದೆ.ವಿಮಾನಗಳ ರೆಕ್ಕೆಗಳ ಕೊನೆಯನ್ನು ಮೇಲ್ಮುಖವಾಗಿ ಅಥವಾ ದ್ವಿಮುಖ ( ಮೇಲೆ ಹಾಗೂ ಕೆಳಗೆ) ಬಾಗಿರುವಂತೆ ಮಾಡುವುದರ ಮುಖ್ಯ ಉದ್ದೇಶ ಇದೇ ಆಗಿದೆ.

No comments