Header Ads

test

ವ್ಯವಸಾಯದಿಂದ ಆ ಗ್ರಾಮವಾಸಿಗಳು ಕೋಟ್ಯಾಧಿಪತಿಗಳಾಗಿದ್ದಾರೆ...!

ಯಾವುದೇ ಕ್ಷೇತ್ರದಲ್ಲಾದರೂ, ಯಾವ ವ್ಯಕ್ತಿಯಾದರೂ ವ್ಯಾಪಾರ ಮಾಡಿದರೆ ಮಾತ್ರ ಕೋಟ್ಯಾಧಿಪತಿಯಾಗುತ್ತಾನೆ. ಆದರೆ ಚೈನಾನಲ್ಲಿ ಆ ಹಳ್ಳಿವಾಸಿಗಳು ಮಾತ್ರ ಹಾಗಲ್ಲ. ಕೇವಲ ವ್ಯವಸಾಯ ಮಾಡುತ್ತಲೇ ಕೋಟ್ಯಾಧೀಶ್ವರರಾಗಿದ್ದಾರೆ. ಹೌದು ಕಣ್ರೀ, ನೀವು ಕೇಳುತ್ತಿರುವುದು ನಿಜ. ಚೈನಾದಲ್ಲಿರುವ ಹುಯಾಕ್ಸಿ ಎಂಬ ಹಳ್ಳಿಯಲ್ಲಿ ಎಲ್ಲರೂ ಕೋಟೇಶ್ವರರೇ. ಒಬ್ಬರೂ ಸಹ ಬಡವರಿಲ್ಲ. ಮತ್ತೆ ಎಲ್ಲರಿಗೂ ಬೆಲೆಬಾಳುವ ವಿಲಾಸಿ ಮನೆಗಳು, ಕಾರುಗಳಿವೆ. ಆದರೆ ಅವರು ಈಗಲೂ ಮಾಡುತ್ತಿರುವುದು ವ್ಯವಾಸಾಯವೇ. ಪಶುಸಂಗೋಪನೆ, ವ್ಯವಸಾಯ…. ಇವುಗಳೇ ಆ ಹಳ್ಳಿಯ ವಾಸಿಗಳಿಗೆ ಆದಾಯದ ಮೂಲಗಳು. ಈ ರೀತಿಯಲ್ಲಿ ಇಂದು ಪ್ರಪಂಚದಾದ್ಯಂತ ಎಲ್ಲರ ದೃಷ್ಟಿ ಆ ಹಳ್ಳಿ ಮೇಲಿದೆ. ಆದರೆ ಆ ಹಳ್ಳಿ ಅಷ್ಟು ಪ್ರಗತಿಯನ್ನು ಸಾಧಿಸುವುದಕ್ಕೆ ಕಾರಣ ಒಬ್ಬ ವ್ಯಕ್ತಿ. ಅವರೇ ಯುರೇನ್ ಬಾವೋ. 1961ರಲ್ಲಿ ಹುಯಾಕ್ಸಿ ಗ್ರಾಮಕ್ಕೆ ಕಮ್ಯೂನಿಷ್ಟ್ ಪಾರ್ಟಿಯ ಕಾರ್ಯದರ್ಶಿಯಾಗಿ ಯುರೇನ್ ಬಾವೋ ಆಯ್ಕೆಯಾದ ದಿನದಿಂದ-ಇಂದಿನವರೆಗೂ ಆ ಹಳ್ಳಿ ಪ್ರಗತಿಯ ಪಥದಲ್ಲಿ ಮುಂದುವರೆಯುತ್ತಲೇ ಇದೆ.


ಹುಯಾಕ್ಸಿ ಹಳ್ಳಿ ಇರುವುದು ಒಂದು ಚದರ ಕಿಲೋಮಿಟರ್ ವಿಸ್ತೀರ್ಣ ಮಾತ್ರ. ಆದರೂ ಅಲ್ಲಿ 1600 ಕುಟುಂಬಗಳಿವೆ. ಅವರು ಅನೇಕ ವರ್ಷಗಳಿಂದ ಒಗ್ಗಟ್ಟಾಗಿ ಇದ್ದು, ಎಲ್ಲರೂ ಸೇರಿ ವ್ಯವಸಾಯವನ್ನು, ಪಶುಸಂಗೋಪನೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಆ ಗ್ರಾಮದಲ್ಲಿ ಬೆಲೆಬಾಳುವ ಕಾರುಗಳ ಜೊತೆಗೆ ಎತ್ತಿನಗಾಡಿಗಳು, ದನಗಳು ಸರ್ವೆ ಸಾಮಾನ್ಯವಾಗಿ ಕಾಣಿಸುತ್ತವೆ. ಈ ಹಳ್ಳಿ ಎಷ್ಟೊ ಅಭಿವೃದ್ದಿ ಸಾಧಿಸುತ್ತಿರುವುದರಿಂದ, ಅದಕ್ಕೆ ಅಕ್ಕಪಕ್ಕದಲ್ಲಿ ಉದ್ಯಮಗಳು ಸ್ಥಾಪಿತವಾಗಿವೆ. ಅದರಲ್ಲಿ ಪ್ರಮುಖವಾದವು ಕೃಷಿ ಆಧಾರಿತ ಉದ್ಯಮಗಳೇ. ಸ್ಟೀಲ್ ಮಿಲ್ಸ್, ಟೆಕ್ಸ್ ಟೈಲ್ ಪಾರ್ಕ್’ಗಳು, ಸಹ ಆ ಹಳ್ಳಿಯ ಸುತ್ತಮುತ್ತಲೂ ಸ್ಥಾಪಿತವಾಗಿರುವುದರಿಂದ ಇಂದು ಸಾವಿರಾರು ಜನರಿಗೆ ಸ್ಥಾನ ಸಿಗುತ್ತಿದೆ. ಆ ಹಳ್ಳಿಯ ವಾಸಿಗಳೆಲ್ಲರೂ ಹಲವೂ ಉದ್ಯಮಗಳಲ್ಲಿ ಪಾಲುದಾರರಾಗಿದ್ದಾರೆ. ಅವರಿಗೆ ಪ್ರತಿವರ್ಷವೂ ತುಂಬಾ ಆದಾಯವೂ ಬರುತ್ತಿದೆ. ಇಂದು ಆ ಹಳ್ಳಿಯಲ್ಲಿನ ಎಲ್ಲರೂ ಕೋಟ್ಯಾದೀಶ್ವರರಾದರೂ ಇಂದಿಗೂ, ಅವರು ವ್ಯವಸಾಯವನ್ನು ಮಾಡುತ್ತಲೇ ಅವರ ಜೀವನವನ್ನು ಸಾಗಿಸುತ್ತಾರೆ. 55 ವರ್ಷಗಳಿಂದ ಅವರು ಪ್ರಗತಿಪಥದಲ್ಲಿ ಮುಂದುವರೆಯುತ್ತಾ ಯಾವುದೇ ತರಹದ ಭೇದಭಾವನೆಗಳಿಲ್ಲದೆ, ಜೀವಿಸುತ್ತಿರುವುದರಿಂದ ಅವರ ಹಳ್ಳಿಯು ಪ್ರಪಂಚದಲ್ಲೇ ಆದರ್ಶ ಹಳ್ಳಿಯಾಗಿ ದಾಖಾಲೆಯನ್ನು ಸಾಧಿಸಿದೆ. ಇದರಿಂದ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಬೆಳೆಯುತ್ತಿದೆ.

ಹುಯಾಕ್ಸಿ ಹಳ್ಳಿಗೆ ಬರುವ ಸಂದರ್ಶಕರಿಗೋಸ್ಕರ 328 ಮೀಟರ್ ಎತ್ತರವಾದ 60 ಅಂತಸ್ತಿನ ಭವನವನ್ನು ನಿರ್ಮಿಸಿದ್ದಾರೆ. ಅದು ನೋಡುವುದಕ್ಕೆ ವರಲ್ಡ್ ಟ್ರೇಡ್ ಸೆಂಟರ್ ತರ ಇದೆ. ಅದರಲ್ಲಿ ಸಂದರ್ಶಕರಿಗೆ ಎಲ್ಲಾ ಸೌಕರ್ಯಗಳಿರುತ್ತವೆ. ಅವರು ಬೇಕಾದಷ್ಟು ದಿನಗಳು ಅಲ್ಲಿ ಇದ್ದು ಹೋಗಬಹುದು. ಅಲ್ಲಿ ಹಸುವಿನ ಬೆಲೆ ಎಷ್ಟೊ ಗೊತ್ತಾ…? ನಮ್ಮ ಕರೆನ್ಸಿಯಲ್ಲಿ ರೂ.48 ಕೋಟಿ. ಇಷ್ಟೇ ಅಲ್ಲ ಇನ್ನೂ ಹಲವು ವಿಶೇಷಗಳು ಹುಯಾಕ್ಸಿ ಗ್ರಾಮದಲ್ಲಿದೆ. ಈ ರೀತಿಯಲ್ಲಿ ಆ ಹಳ್ಳಿಯನ್ನು ಪ್ರಗತಿ ಪಥದಲ್ಲಿರಿಸಿದ ಯುರೇನಾ ಬಾವೋ ಇಂದಿಗೂ ಬದುಕಿದ್ದಾರೆ. ಅವರ ವಯಸ್ಸು ಈಗ 86ವರ್ಷ. ಆದರೆ ವೃದ್ಧಾಪ್ಯದ ಕಾರಣವಾಗಿ ಈಗ ಅವರು ಆ ಹಳ್ಳಿವಾಸಿಗಳ ಕೆಲಸಗಳಲ್ಲಿ ಭಾಗವಹಿಸಲಾಗುತ್ತಿಲ್ಲ. ಆದರೆ ಅವರ ಮಗ ಆ ಹಳ್ಳಿಯ ಕಮ್ಯೂನಿಸ್ಟ್ ಪಾರ್ಟಿಯ ಕಾರ್ಯದರ್ಶಿಯಾಗಿ, ಈಗ ಅಲ್ಲಿನ ಪ್ರಜೆಗಳಿಗೆ ಸೇವೆ ಮಾಡುತ್ತಿದ್ದಾರೆ. ಹಳ್ಳಿಯನ್ನು ಮತ್ತಷ್ಟು ಅಭಿವೃದ್ದಿ ಮಾಡುತ್ತಿದ್ದಾರೆ. ಇಂದು ಅಲ್ಲಿನ ಪ್ರಜೆಗಳಿಗೆ ಅಡುಗೆ ಗ್ಯಾಸ್, ವೈದ್ಯಸೇವೆ, ಅಡುಗೆ ಎಣ್ಣೆ ಅಂತಹ ಸೌಲಭ್ಯಗಳು ಉಚಿತವಾಗಿ ನೀಡುತ್ತಿದ್ದಾರೆ. ಹೀಗೆ ಆ ಹಳ್ಳಿ ಚೈನಾದ ದುಬಾಯ್ ಆಗಿ ಹೆಸರು ಪಡೆದಿದೆ. ಆ ಹಳ್ಳಿಯನ್ನು ಇಂದಿನವರೆಗೂ 20 ಲಕ್ಷ ಜನರು ಸಂದರ್ಶಿಸಿದ್ದಾರೆ. ಆದರೂ ಇನ್ನೂ ಅನೇಕ ಜನರು ಬರುತ್ತಲೇ ಇದ್ದಾರೆ. ಒಂದನ್ನೊಂದು ಕಾಲದಲ್ಲಿ ಗುಡಿಸಿಲುಗಳಿಂದ ಇದ್ದ ಆ ಸ್ಥಳವು ಈಗ ಬೆಲೆಬಾಳುವ ವಿಲಾಸಿ ಭವನಗಳಿಗೆ, ಕಾರುಗಳಿಗಳಿಗೆ ನಿಲಯವಾಗಿರುವುದಕ್ಕೆ ಅಲ್ಲಿನ ಜನರ ಐಕ್ಯತೆ, ಒಗ್ಗಟ್ಟು ಅದನ್ನು ನಡೆಸುವುದಕ್ಕೆ ಒಂದು ಬಲವಾದ ನಾಯಕ ಕನಿಷ್ಟ ಒಂದು ಊರಿಗೆ ಒಬ್ಬರಾದರೂ ಇರಬೇಕು.

No comments