Header Ads

test

ಆ ಸಾಫ್ಟ್‌ವೇರ್ ಉದ್ಯೋಗಿ "ಸ್ಯಾಲರಿ ಸ್ಲಿಪ್" ನೋಡಿ ಆಟೋ ಡ್ರೈವರ್ 200 ಚಾರ್ಜ್ ತೆಗೆದುಕೊಳ್ಳದೆ ಹೊರಟುಹೋದ..ಯಾಕೆ ಗೊತ್ತಾ.?

ಸಾಫ್ಟ್‌ವೇರ್ ಉದ್ಯೋಗ ಎಂದರೆ ಸಾಮಾನ್ಯವಾಗಿ ಒಳ್ಳೆಯ ಸಂಬಳ ಬರುತ್ತದೆ ಅಲ್ಲವೇ. ತಿಂಗಳಿಗೆ ಸಾವಿರಗಳಲ್ಲಿ, ವರ್ಷಕ್ಕೆ ಲಕ್ಷಗಳಲ್ಲಿ ಸಂಬಳ ಎಣಿಸುತ್ತಾರೆ. ಇನ್ನು ಅಷ್ಟೆಲ್ಲಾ ಸಂಬಳ ಎಂದರೆ ಅವರ ವೈಭೋಗ ನೋಡಲು ಎರಡು ಕಣ್ಣು ಸಾಲದು. ಕಾರು, ಬಂಗಲೆಯಂತಹವನ್ನು ಇಟ್ಟುಕೊಂಡು ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ. ಆದರೆ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಸಂಬಂಧಿಸಿದ ಸಂಬಳ, ಅವರಿಗೆ ಸಿಗುವ ಸೌಲಭ್ಯಗಳು ವಾಸ್ತವವೇ ಆಗಿದ್ದರೂ…ಅವೆಲ್ಲಾ ಗೊತ್ತಿದ್ದೂ ಸಹ ಆ ಆಟೋ ಡ್ರೈವರ್ ಓರ್ವ ಐಟಿ ಉದ್ಯೋಗಿ ಬಳಿ ತನ್ನ ಆಟೋ ಚಾರ್ಜ್ ತೆಗೆದುಕೊಳ್ಳಲಿಲ್ಲ. ಆತನನ್ನು ಬಿಟ್ಟುಬಿಟ್ಟ. ತನ್ನ ಆಟೋದಲ್ಲಿ ಆತನನ್ನು ಫ್ರೀಯಾಗಿ ಕರೆದೊಯ್ದ. ಶಾಕಿಂಗ್ ಅನ್ನಿಸುವ ಈ ಘಟನೆ ನಿಜ. ಇದು ನಡೆದದ್ದು ನಮ್ಮ ಬೆಂಗಳೂರಿನಲ್ಲೇ. ಇಷ್ಟಕ್ಕೂ ಅಸಲಿ ವಿಷಯ ಏನೆಂದರೆ


ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬ 5 ಕಿಲೋ ಮೀಟರ್ ದೂರದಲ್ಲಿರುವ ತನ್ನ ಮನೆಗೆ ಆಟೋದಲ್ಲಿ ಹೋದ. ಆಟೋ ಡ್ರೈವರ್ 200 ರೂಪಾಯಿ ಕೇಳಿದ. ಕೇವಲ 5 ಕಿಲೋ ಮೀಟರ್‌ಗೆ ರೂ.200 ಹೇಗಾಗುತ್ತದೆ? ಕಡಿಮೆ ಮಾಡಬೇಕೆಂದು ಆ ಐಟಿ ಉದ್ಯೋಗಿ ಆ ಆಟೋ ಡ್ರೈವರನ್ನು ಕೇಳಿದ. ಬಹಳಷ್ಟು ಹೊತ್ತು ವಾದ ಮಾಡಿದರೂ ಆ ಆಟೋಡ್ರೈವರ್ ಒಪ್ಪಿಕೊಳ್ಳಲಿಲ್ಲ. ಆಟೋ ಚಾರ್ಜ್ ಒಟ್ಟು ರೂ.200 ಕೊಡಲೇಬೇಕು ಎಂದು ಪಟ್ಟು ಹಿಡಿದ.

ಇದರಿಂದ ಆ ಐಟಿ ಉದ್ಯೋಗಿ ಇನ್ನೇನು ಮಾಡಲಾಗದೆ ಕಡೆಗೆ ಏನು ತೋರಿಸಿದ ಗೊತ್ತಾ..? ಜೇಬಿನಿಂದ ತನ್ನ ಪೇ ಸ್ಲಿಪ್ ತೆಗೆದು ಆ ಆಟೋ ಚಾಲಕನಿಗೆ ತೋರಿಸಿದ. ಅದನ್ನು ನೋಡಿ ಮರುಮಾತನಾಡದೆ ಆಟೋ ಡ್ರೈವರ್, ರೂ.200 ತೆಗೆದುಕೊಳ್ಳದೆ ಸುಮ್ಮನಾದ.ಆ ಐಟಿ ಉದ್ಯೋಗಿ ತೋರಿಸಿದ ಪೇ ಸ್ಲಿಪ್‌ನಲ್ಲಿ ಆತನಿಗೆ ಬರುವ ಸಂಬಳ ಎಷ್ಟಿದೆ ಗೊತ್ತಾ..? ರೂ.27,083. ಅದನ್ನು ನೋಡಿ ಆ ಆಟೋ ಡ್ರೈವರ್ ತನಗೆ ಬರಬೇಕಾದ ರೂ.200 ಬಿಟ್ಟು ಫ್ರೀಯಾಗಿ ಆ ಐಟಿ ಉದ್ಯೋಗಿಯನ್ನು ಕರೆದೊಯ್ದ. ಸಂಬಳ ಚೆನ್ನಾಗಿಯೇ ಇದೆಯಲ್ಲವೇ. ಹಾಗಿದ್ದೂ ಯಾಕೆ ಹಣ ತೆಗೆದುಕೊಳ್ಳಲಿಲ್ಲ. ರೂ.200 ಅಲ್ಲದಿದ್ದರೂ, ಕನಿಷ್ಟ ಅದರಲ್ಲಿ ಅರ್ಧವಾದರೂ ತೆಗೆದುಕೊಳ್ಳಬಹುದಿತ್ತಲ್ಲವೆ… ಎಂದು ನಿಮಗೆ ಡೌಟ್ ಬಂದೇ ಇರುತ್ತದೆ. ಇಲ್ಲೇ ಇದೆ ನೋಡಿ ಟ್ವಿಸ್ಟ್. ಅದೇನೆಂದರೆ… ಆ ಐಟಿ ಉದ್ಯೋಗಿ ಪ್ಲೇ ಸ್ಲಿಪ್ ನೋಡಿದ ಬಳಿಕ ಆ ಆಟೋ ಡ್ರೈವರ್ ಏನೆಂದನೆಂದರೆ…ತಾನು ಒಂದು ವಾರ ಕಾಲ ಆಟೋ ಓಡಿಸಿದರೆ ಆ ಐಟಿ ಉದ್ಯೋಗಿಗೆ ಬರುವ ತಿಂಗಳ ಸಂಬಳದಷ್ಟು ಸಂಪಾದಿಸುತ್ತಾನಂತೆ. ಈಗ ಯಾರ ಸಂಪಾದನೆ ಹೆಚ್ಚಾಗುತ್ತದೆ ಹೇಳಿ. ಹಾಗಾಗಿಯೇ ಆ ಆಟೋ ಡ್ರೈವರ್ ಆ ಐಟಿ ಉದ್ಯೋಗಿಯನ್ನು ಫ್ರೀಯಾಗಿ ಕರೆದೊಯ್ದ. ಇವರಿಬ್ಬರ ನಡುವೆ ನಡೆದ ಚರ್ಚೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ..! ಅದೇನೇ ಇರಲಿ…ಇದು ನಿಜ ಅಲ್ಲವೇ..! ಒಮ್ಮೊಮ್ಮೆ ಈ ರೀತಿ ನಡೆಯುತ್ತಿರುತ್ತದೆ.ಜೇಬಿನಿಂದ ತನ್ನ ಪೇ ಸ್ಲಿಪ್ ತೆಗೆದು ಆ ಆಟೋ ಚಾಲಕನಿಗೆ ತೋರಿಸಿದ.

1 comment: