Header Ads

test

ಗಂಡ ಹೆಂಡತಿ ಸಂಬಂಧ ಚಿರಕಾಲ ಹಾಯಾಗಿ ಇರಬೇಕಾದರೆ ಈ 11 ನಿಯಮಗಳನ್ನು ಪಾಲಿಸಿದರೆ ಸಾಕು!

ಹೆಣ್ಣಾಗಲಿ, ಗಂಡಾಗಲಿ ಮದುವೆಯಾಗದೆ ಸಿಂಗಲ್ ಆಗಿ ಇರುವವರೆಗೂ ಎಲ್ಲವೂ ಸಂತೋಷವಾಗಿ ಇರುತ್ತದೆ. ಜೀವನವನ್ನು ಎಂಜಾಯ್ ಮಾಡುತ್ತಾರೆ ಕೂಡ. ಫ್ರೆಂಡ್ಸ್ ಜತೆ ಓಡಾಡುವುದು, ಪಾರ್ಟಿ, ಪಬ್, ಟೂರ್‌ಗಳನ್ನು ಹಾಕುವುದು… ಹೀಗೆ ಬಹಳಷ್ಟು ಮಂದಿ ನಾನಾ ರೀತಿಯಲ್ಲಿ ಆ ಸಮಯದಲ್ಲಿ ಎಂಜಾಯ್ ಮಾಡುತ್ತಾರೆ. ಆದರೆ ಒಮ್ಮೆ ಮದುವೆಯಾದರೆ ಮಾತ್ರ ಇನ್ನು ಯಾರು ಏನೇ ಅಂದುಕೊಂಡರೂ, ಅಂದುಕೊಳ್ಳದಿದ್ದರೂ ಈ ರೀತಿಯ ಆಟಗಳೆಲ್ಲಾ ಬಂದ್ ಆಗುತ್ತವೆ. ಜತೆಗೆ ಕೆಲಸದ ಒತ್ತಡವೂ ಬೆಳೆಯುತ್ತದೆ. ಇದರಿಂದಾಗಿ ನಿತ್ಯ ಆಫೀಸಲ್ಲಿ ಕೆಲಸ ಮಾಡಿ ಮನೆಗೆ ಬಂದ ಮೇಲೆ ಸಂಗಾತಿ ಜತೆ ಕಳೆಯಲು ಸಮಯ ಸಹ ಸಿಗಲ್ಲ. ಕೆಲವು ಸಂದರ್ಭಗಳಲ್ಲಾದರೆ ಒಬ್ಬರನ್ನೊಬ್ಬರು ಹಿಡಿಸಿಕೊಳ್ಳುವುದೂ ಇಲ್ಲ. ಆದರೆ ದಂಪತಿಗಳು ಈ ರೀತಿ ಇರುವುದು ಒಳ್ಳೆಯದಲ್ಲ. ಅವರ ಜೀವನ ಸುಖವಾಗಿ ಇರಬೇಕೆಂದರೂ, ಯಾವುದೇ ರೀತಿಯ ತೊಂದರೆ ಇಲ್ಲದಂತೆ ಆರಾಮವಾಗಿ ಲೈಫ್ ಕಳೆಯಬೇಕೆಂದರೂ ಕೆಲವು ಸೂಚನೆಗಳನ್ನು ಪಾಲಿಸಬೇಕು ಎನ್ನುತ್ತಿದ್ದಾರೆ ವೈದ್ಯರು. ಆ ಸೂಚನೆಗಳು ಯಾವುದೆಂದರ.

 • ದಂಪತಿಗಳಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರೂ ಜಾಬ್ ಮಾಡಿದರೂ ಸಂಜೆ ಮನೆಗೆ ಬಂದ ಕೂಡಲೆ ತಮ್ಮ ಸಂಗಾತಿಯನ್ನು ಆತ್ಮೀಯವಾಗಿ ಒಮ್ಮೆ ಮಾತನಾಡಿಸಬೇಕಂತೆ. ಅಷ್ಟೇ ಹೊರತು ಅವರನ್ನು ಹಿಡಿಸಿಕೊಳ್ಳದೆ ಇರಬಾರದು. ಆ ರೀತಿ ಮಾತನಾಡುವುದರಿಂದ ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ. ದಿನವೆಲ್ಲಾ ಆಫೀಸಲ್ಲಿ ಎದುರಾಗುವ ಒತ್ತಡ ಸಹ ದೂರವಾಗುತ್ತದೆ.

 • ಆಫೀಸಿನಿಂದ ಮನೆಗೆ ಬರುವಾಗ ಆಫೀಸು ವಿಷಯಗಳನ್ನು ಬಿಟ್ಟು ಮನೆ ಬಗ್ಗೆ, ಜೀವನ ಸಂಗಾತಿ ಬಗ್ಗೆ ಸ್ವಲ್ಪ ಹೊತ್ತು ಆಲೋಚಿಸಬೇಕಂತೆ. ಇದರಿಂದ ನಿಮ್ಮನ್ನು ಮನೆಯ ಬಳಿ ಇರುವವರು ಎಷ್ಟು ಪ್ರೀತಿಸುತ್ತಿದ್ದಾರೋ, ಅವರು ನಿಮ್ಮನ್ನು ಎಷ್ಟು ಮಿಸ್ ಆಗುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ.

 • ನಿತ್ಯ ಆಫೀಸ್ ಕೆಲಸಗಳಿಂದ ಒದ್ದಾಡುತ್ತಿದ್ದರೂ, ಆಗಾಗ ಜಾಲಿಯಾಗಿ ಹೊರಗೆ ಸುತ್ತಾಡಿ ಬರಬೇಕಂತೆ. ಯಾವುದಾರು ಪಾರ್ಕ್ ಅಥವಾ ಸಿನಿಮಾ, ರೆಸ್ಟೋರೆಂಟ್‌ಗೆ ಹೋಗಿ ಎಂಜಾಯ್ ಮಾಡಿ ಬರಬೇಕು.

 • ಬಹಳಷ್ಟು ದಂಪತಿಗಳು ತಮ್ಮ ಜೀವನ ಸಂಗಾತಿಯ ಜತೆ ಲೈಫನ್ನು ಎಂಜಾಯ್ ಮಾಡಲು ಇಷ್ಟಪಡುತ್ತಾರೆ. ಈ ಹಿನ್ನೆಲೆಯಲ್ಲಿ ಇತರರು ಯಾರಾದರು ಮನೆಗೆ ಬಂದು ಡಿಸ್ಟರ್ಬ್ ಮಾಡದಂತೆ ರೂಮಿನ ಬಾಗಿಲುಗಳನ್ನು ಹಾಕಿಕೊಂಡು ಲೈಫನ್ನು ಎಂಜಾಯ್ ಮಾಡಬೇಕಂತೆ. ಎಲ್ಲವನ್ನೂ ತೆರೆದಿಡಬಾರದು. ಆ ರೀತಿ ಇದ್ದರೆ ಕೆಲವು ದಂಪತಿಗಳಿಗೆ ಇಷ್ಟವಾಗಲ್ಲವಂತೆ.

 • ದೇಹದಿಂದ ದುರ್ವಾಸನೆ ಬರುವುದು, ಗ್ಯಾಸ್ ಸಮಸ್ಯೆಗಳು ಇವೆಲ್ಲಾ ಪ್ರಕೃತಿ ಸಹಜ ಕ್ರಿಯೆಗಳು. ಇವು ಪ್ರತಿಯೊಬ್ಬರಿಗೂ ಸಹಜ. ಆದರೆ ಅವುಗಳಿಂದ ಬೇಸರ ಮಾಡಿಕೊಳ್ಳಬಾರದಂತೆ. ಇದೇನಿದು ದುರ್ವಾಸನೆ ಎಂದು ಅವರನ್ನು ದೂರ ತಳ್ಳಬಾರದು.

 • ಮನೆಯಲ್ಲಿ ಯಾವುದೇ ಕೆಲಸ ಮಾಡಿದರೂ ಸಾಮಾನ್ಯವಾಗಿ ಮಹಿಳೆಯರೇ ಮಾಡುತ್ತಾರೆ. ಗಂಡಸರು ಮಾಡಲ್ಲ. ತರಕಾರಿ ಹೆಚ್ಚುವುದು, ಬಟ್ಟೆ ಒಗೆಯುವುದು, ಮನೆ ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಹೆಂಗಸರ ಜತೆ ಹಂಚಿಕೊಂಡರೆ ಆಗ ಆ ದಂಪತಿಗಳ ಜೀವನ ಸಂತೋಷವಾಗಿ ಇರುತ್ತದೆ.

 • ಬಹಳಷ್ಟು ಮಂದಿ ಸ್ರೀ ಪುರುಷರು ಮದುವೆಯಾದ ಸ್ವಲ್ಪ ದಿನಗಳಿಗೆ ಅಥವಾ ಸ್ವಲ್ಪ ತಿಂಗಳ ಬಳಿಕ ತಮ್ಮ ಹಾಬಿಗಳನ್ನು, ಇಷ್ಟಗಳನ್ನು ಬಿಟ್ಟುಬಿಡುತ್ತಾರಂತೆ. ಆದರೆ ಆ ರೀತಿ ಮಾಡಬೇಕಾದ ಅಗತ್ಯ ಇಲ್ಲವಂತೆ. ಜೀವನ ಸಂಗಾತಿ ಜತೆ ಹೊಂದಿಕೊಂಡು ಹೋಗುತ್ತಾ ತಮ್ಮ ಇಷ್ಟ, ಹಾಬಿಗಳನ್ನು ಮುಂದುವರೆಸಿದರೆ ತೊಂದರೆ ಏನೂ ಇರಲ್ಲ.

 • ದಂಪತಿಗಳು ಎಂದ ಮೇಲೆ ಇಬ್ಬರ ನಡುವೆ ಕಠಿಣ ಸಂದರ್ಭಗಳೂ ಬರುತ್ತಿರುತ್ತವೆ. ಅಂತಹ ಸಮಯದಲ್ಲಿ ಸಾಧ್ಯವಾದಷ್ಟು ತೀವ್ರವಾಗಿ ಮನೋಭಾವಗಳನ್ನು ವ್ಯಕ್ತಪಡಿಸುವುದು, ಅಥವಾ ಬೈಯ್ಯುವುದನ್ನು ಮಾಡಬಾರದು. ಆ ರೀತಿ ಮಾಡಿದರೆ ಎದುರಿನವರಿಗೆ ಜೀವನ ಸಂಗಾತಿ ಮೇಲಿನ ಪ್ರೀತಿ ದೂರವಾಗುತ್ತದೆ.

 • ದಂಪತಿಗಳಲ್ಲಿ ಇಬ್ಬರೂ ತಮ್ಮ ಎರಡೂ ಕಡೆಯ ಬಂಧುಗಳು, ಕುಟುಂಬ ಸದಸ್ಯರು, ಸ್ನೇಹಿತರನ್ನು ಸಮಾನ ಗೌರವ ಕೊಡಬೇಕು. ಇದರಿಂದ ಜೀವನ ಸಂಗಾತಿಯ ಮೇಲೆ ಒಳ್ಳೆಯ ಅಭಿಪ್ರಾಯ ಉಂಟಾಗುತ್ತದೆ.

 • ಮನೆಯಲ್ಲಿ ತುಂಬಾ ಕೋಣೆಗಳಿರುವ ದಂಪತಿಗಳು ಯಾವಾಗಲೂ ಒಂದೇ ಕೋಣೆಯಲ್ಲಿ ಅಲ್ಲದೆ ಇಬ್ಬರೂ ಸ್ವಲ್ಪ ಸಮಯ ಬೇರೆ ಬೇರೆ ರೂಮುಗಳಲ್ಲಿ ಕಳೆದರೆ ಇದರಿಂದ ಥ್ರಿಲ್ಲಿಂಗ್ ಆಗಿರುತ್ತದೆ.

 • ದಂಪತಿಗಳಿಬ್ಬರೂ ತಮ್ಮ ಸಂಬಂಧಗಳಲ್ಲಿ ಏನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ, ಏನೆಲ್ಲಾ ಗ್ರಹಿಸುತ್ತಿದ್ದಾರೆ ಎಂದು ಯಾವಾಗಲೂ ತಿಳಿದುಕೊಳ್ಳುತ್ತಾ ಇರಬೇಕು. ಇದರಿಂದ ಜೀವನವನ್ನು ಆನಂದವಾಗಿ ಕಳೆಯಲು ಸಾಧ್ಯವಾಗುತ್ತದೆ.

1 comment: