ಈ 5 ಸಲಕರಣೆಗಳು ನಿಮ್ಮ ಮನೆಯಲ್ಲಿ ಇವೆಯೇ..? ಆದರೆ ಎಚ್ಚರ “SWITHCH ON” ಮಾಡಿದ್ದರೂ ಕರೆಂಟ್ ಬಳಸಿಕೊಳ್ಳುತ್ತವೆ..!

Information

ನಾವು ಮನೆಯಲ್ಲಿ ಬಳಸುವ ಯಾವುದೇ ವಿದ್ಯುತ್ ಸಲಕರಣೆಯಾದರೂ ವಿದ್ಯುತ್ ಇಲ್ಲದೆ ಕೆಲಸ ಮಾಡಲ್ಲ. ವಿದ್ಯುತ್ ಇಲ್ಲದಿದ್ದಾಗ ಕನೆಕ್ಟ್ ಆಗಿದ್ದರೆ ಮಾತ್ರ ಅವು ಕೆಲಸ ಮಾಡುತ್ತವೆ. ಆದರೆ ಎಲ್ಲಾ ವಿದ್ಯುತ್ ಸಲಕರಣೆಗಳು ಒಂದೇ ರೀತಿ ವಿದ್ಯುತ್ತನ್ನು ಬಳಸಿಕೊಳ್ಳಲ್ಲ. ಕೆಲವು ಹೆಚ್ಚಾಗಿ ವಿದ್ಯುತ್ ಬಳಸಿಕೊಂಡರೆ ಇನ್ನೂ ಕೆಲವು ಕಡಿಮೆ ಕರೆಂಟನ್ನು ಬಳಸಿಕೊಳ್ಳುತ್ತವೆ. ಇನ್ನೂ ಕೆಲವು ಉಪಕರಣಗಳು ನಮಗೆ ಗೊತ್ತಿಲ್ಲದೆ ವಿದ್ಯುತ್ತನ್ನು ಸೆಳೆದುಕೊಳ್ಳುತ್ತವೆ. ಅಯ್ಯೋ ಏನ್ ಹೇಳುತ್ತಿದ್ದೀರಾ.. ಅರ್ಥವಾಗಲಿಲ್ಲವೇ..? ಅದೇ ರೀ ಮೊಬೈಲ್ ಚಾರ್ಜರ್‌ಗಳು ಇರುತ್ತವೆ ಅಲ್ಲವೇ. ಅವೇ..! ಅವುಗಳ ಜತೆಗೆ ಎಲೆಕ್ಟ್ರಾನಿಕ್ ವಸ್ತುಗಳು ಸಹ ಆಫ್ ಮಾಡಿದಾಗ ಕರೆಂಟ್ ಬಳಸಿಕೊಳ್ಳುತ್ತಲೇ ಇರುತ್ತವೆ. ಇನ್ನೂ ಅರ್ಥವಾಗಲಿಲ್ಲ ಅಲ್ಲವೇ, ಆದರೆ ಅದು ಹೇಗೆ ಎಂದು ಈಗ ತಿಳಿದುಕೊಳ್ಳೋಣವೇ..?

1. ಮೊಬೈಲ್ ಚಾರ್ಜರ್‌ಗಳು : ಬಹಳಷ್ಟು ಮಂದಿ ಏನು ಮಾಡುತ್ತಾರೆಂದರೆ ಮೊಬೈಲ್‌ ಚಾರ್ಜಿಂಗ್‌ಗೆ ಹಾಕಿ ತೆಗೆದ ಬಳಿಕ ಚಾರ್ಜರನ್ನು ಸಾಕೆಟ್‌ನಲ್ಲೇ ಇಡುತ್ತಾರೆ. ಸ್ವಿಚ್ ಆಪ್ ಮಾಡಲ್ಲ. ಅದರಿಂದ ಏನಾಗುತ್ತದೆ ಬಿಡು…ಎಂಬ ಅಸಡ್ಡೆ. ಆದರೆ ಆ ರೀತಿ ಚಾರ್ಜರನ್ನು ಸಾಕೆಟ್‍ನಲ್ಲಿ ಇಟ್ಟು ಸ್ವಿಚ್ ಆಫ್ ಮಾಡಿದರೆ ಸ್ವಲ್ಪ ವಿದ್ಯುತ್ತನ್ನು ಅದು ಯಾವಾಗಲೂ ಬಳಸಿಕೊಳ್ಳುತ್ತಿರುತ್ತದಂತೆ. ಹೌದು. ಆದರೆ ಆ ವಿದ್ಯುತ್ ಬಳಕೆ ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಸಾಮಾನ್ಯವಾಗಿ ಅ ರೀತಿ ಚಾರ್ಜರ್ ಇಟ್ಟು ಹಾಗೆಯೇ ಬಿಟ್ಟರೆ ದಿನಕ್ಕೆ 1.2 ವ್ಯಾಟ್ ವಿದ್ಯುತ್ ವ್ಯರ್ಥವಾಗುತ್ತದೆ. ಆದರೆ…ಆ ರೀತಿ ಇಟ್ಟರೆ ದೀರ್ಘಕಾಲದಲ್ಲಿ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ. ಆದಕಾರಣ ಚಾರ್ಜರನ್ನು ಸಾಕೆಟ್‌ನಲ್ಲಿ ಇಟ್ಟು ಹಾಗೆಯೇ ಬಿಡಬಾರದು. ಅದನ್ನು ಸ್ವಿಚ್ ಆಫ್ ಮಾಡಬೇಕು.

2. ಡಿಜಿಟಲ್ ಟಿವಿ ಟ್ಯೂನರ್: ಕಂಪ್ಯೂಟರ್‌ಗಳಿಗೆ ಅನುಸಂಧಾನ ಮಡುವ ವಿಧದಲ್ಲಿರುವ ಡಿಜಿಟಲ್ ಟಿವಿ ಟ್ಯೂನರ್‌ಗಳನ್ನು ಬಹಳಷ್ಟು ಮಂದಿ ಸ್ಟ್ಯಾಂಡ್ ಬೈ ಮೋಡ್‍ನಲ್ಲಿ ಇಡುತ್ತಾರೆ. ಸ್ವಿಚ್ ಆಫ್ ಮಾಡಲ್ಲ. ಆ ರೀತಿ ಮಾಡುವುದರಿಂದ ಕರೆಂಟ್ ವ್ಯರ್ಥವಾಗುತ್ತದೆ. ಇದರಿಂದ ನಿತ್ಯ ಸುಮಾರು 22 ವ್ಯಾಟ್ಸ್ ಕರೆಂಟ್ ಖರ್ಚಾಗುತ್ತದೆ. ಅದೆಲ್ಲಾ ವ್ಯರ್ಥ ಅಲ್ಲವೇ. ಆದಕಾರಣ ಅವುಗಳನ್ನು ಸ್ಟ್ಯಾಂಡ್ ಬೈ ಮೋಡ್‌ನಲ್ಲಿ ಇಡಬಾರದು.

3. ಟಿವಿ : ಟಿವಿ ಸಹ ಬಹಳಷ್ಟು ಮಂದಿ ರಿಮೋಟ್‌ನಿಂದ ಆಫ್ ಮಾಡುತ್ತಾರೆ. ಕೆಲವರು ಸ್ಟ್ಯಾಂಡ್ ಬೈ ಮೋಡ್‍ನಲ್ಲಿ ಇಡುತ್ತಾರೆ. ಆದರೆ ಆ ರೀತಿ ಮಾಡಿದರೆ ವಿದ್ಯುತ್ ಅನಗತ್ಯವಾಗಿ ವ್ಯರ್ಥವಾಗುತ್ತದೆ. ನಿತ್ಯ 24 ವ್ಯಾಟ್ ಕರೆಂಟ್ ವೇಸ್ಟ್ ಆಗುತ್ತದೆ. ಆದಕಾರಣ ಟಿವಿಗಳನ್ನು ಸ್ವಿಚ್ ಆಫ್ ಮಾಡಬೇಕು.

4. ಪಿಸಿಗಳು, ಲ್ಯಾಪ್‌ಟಾಪ್‌ಗಳು: ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು ಅಥವಾ ಲ್ಯಾಪ್‍ಟಾಪ್‌ಗಳನ್ನು ಸ್ವಿಚ್ ಆಫ್ ಮಾಡದೆ ಸ್ಟ್ಯಾಂಡ್ ಬೈ ಮೋಡ್‌ನಲ್ಲಿ ಇಟ್ಟರೂ ದಿನಕ್ಕೆ 96 ವ್ಯಾಟ್‌ವರೆಗೂ ವಿದ್ಯುತ್ ವ್ಯರ್ಥವಾಗುತ್ತದೆ. ಆದಕಾರಣ ಅಗತ್ಯ ಎನ್ನಿಸಿದರೆ ಮಾತ್ರ ಆನ್ ಮಾಡಿ. ಇಲ್ಲದಿದ್ದರೆ ಸ್ವಿಚ್ ಆಫ್ ಮಾಡುವುದು ಒಳಿತು.

5. ಟೈಮರ್ ಇರುವ ಉಪಕರಣಗಳು: ಟೈಮರ್‌ನಿಂದ ಕೆಲಸ ಮಾಡುವ ವಾಷಿಂಗ್ ಮೆಷಿನ್, ಓವೆನ್‌ನಂತಹ ಉಪಕರಣಗಳು ಸಹ ಅಗತ್ಯ ಇಲ್ಲದಿದ್ದಾಗ ಸ್ವಿಚ್ ಆಫ್ ಮಾಡುವುದು ಒಳಿತು. ಇಲ್ಲದಿದ್ದರೆ ಅವುಗಳಿಂದ ನಿತ್ಯ ಸುಮಾರು 108 ವ್ಯಾಟ್ ಕರೆಂಟ್ ವ್ಯರ್ಥವಾಗುತ್ತದೆ.

ಮೇಲೆ ತಿಳಿಸಿದ ಸೂಚನೆಗಳನ್ನು ನೀವು ಪಾಲಿಸಿದರೆ ವರ್ಷಕ್ಕೆ ಏನಿಲ್ಲವೆಂದರೂ ಗರಿಷ್ಠ ಸುಮಾರು ರೂ.17 ಸಾವಿರದವೆಗೂ ಉಳಿತಾಯವಾಗುತ್ತದೆ. ಇದನ್ನು ತಜ್ಞರು ಅಂದಾಜಿಸಿದ್ದಾರೆ. ಹಾಗಾಗಿ ಮೇಲೆ ತಿಳಿಸಿದ ಸಲಕರಣೆಗಳನ್ನು ಸಾಧ್ಯವಾದಷ್ಟು ಆಫ್ ಮಾಡಿ ಇಡಿ. ಯಾವುದೇ ಕಾರಣಕ್ಕೂ ಸ್ಟ್ಯಾಂಡ್ ಬೈ ಮೋಡ್‌ನಲ್ಲಿ ಇಡಬೇಡಿ. ಇದರಿಂದ ವಿದ್ಯುತ್ ಅನಗತ್ಯವಾಗಿ ವ್ಯರ್ಥವಾಗುತ್ತದೆ. ಎಷ್ಟೇ ಆಗಲಿ ಇಂಧನ ಅಲ್ಲವೇ.

 

Leave a Reply